ಭಾರತೀಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಒಟ್ಟು 192 ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲಾ ಅರ್ಹ ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ಸೈಟ್ ನಲ್ಲಿ ಉದ್ಯೋಗದ ಮಾಹಿತಿಯನ್ನು ಪಡೆಯಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಒಂದು ಸುವರ್ಣ ಅವಕಾಶ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 19 ನವೆಂಬರ್ 2023.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2023
ಸಂಸ್ಥೆಯ ಹೆಸರು : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಗಳ ಹೆಸರು : ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆಗಳು : 192 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳ ವಿವರಗಳು
- ಮಾಹಿತಿ ತಂತ್ರಜ್ಞಾನ (ಸ್ಕೇಲ್ V) – 01 ಹುದ್ದೆಗಳು
- ಅಪಾಯ ನಿರ್ವಾಹಕ (ಸ್ಕೇಲ್ V) – 01 ಹುದ್ದೆಗಳು
- ಅಪಾಯ ನಿರ್ವಾಹಕ (ಸ್ಕೇಲ್ IV) – 01 ಹುದ್ದೆಗಳು
- ಮಾಹಿತಿ ತಂತ್ರಜ್ಞಾನ (ಸ್ಕೇಲ್ III) – 06 ಹುದ್ದೆಗಳು
- ಹಣಕಾಸು ವಿಶ್ಲೇಷಕ (ಸ್ಕೇಲ್ III) – 05 ಹುದ್ದೆಗಳು
- ಮಾಹಿತಿ ತಂತ್ರಜ್ಞಾನ (ಸ್ಕೇಲ್ II) – 73 ಹುದ್ದೆಗಳು
- ಕಾನೂನು ಅಧಿಕಾರಿ (ಸ್ಕೇಲ್ II) – 15 ಹುದ್ದೆಗಳು
- ಕ್ರೆಡಿಟ್ ಅಧಿಕಾರಿ (ಸ್ಕೇಲ್ II) – 50 ಹುದ್ದೆಗಳು
- ಹಣಕಾಸು ವಿಶ್ಲೇಷಕ (ಸ್ಕೇಲ್ II) – 04 ಮುದ್ದೆಗಳು
- CA-ಹಣಕಾಸು ಮತ್ತು ಖಾತೆಗಳು/ GST/ Ind AS/ ಬ್ಯಾಲೆನ್ಸ್ ಶೀಟ್/ತೆರಿಗೆ (ಸ್ಕೇಲ್ II) – 03 ಹುದ್ದೆಗಳು
- ಮಾಹಿತಿ ತಂತ್ರಜ್ಞಾನ (ಸ್ಕೇಲ್ I) – 15 ಹುದ್ದೆಗಳು
- ಭದ್ರತಾ ಅಧಿಕಾರಿ (ಸ್ಕೇಲ್ I) – 15 ಹುದ್ದೆಗಳು
- ಅಪಾಯ ನಿರ್ವಾಹಕ (ಸ್ಕೇಲ್ I) – 02 ಹುದ್ದೆಗಳು
- ಗ್ರಂಥಪಾಲಕ (ಸ್ಕೇಲ್ I) – 01 ಹುದ್ದೆಗಳು
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಅರ್ಹತೆಯ ವಿವರಗಳ ಮಾಹಿತಿ
ಶೈಕ್ಷಣಿಕ ವಿದ್ಯಾರ್ಹತೆ : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಪ್ರಕಾರ ಅಭ್ಯರ್ಥಿಯು CA, ICWA, Degree, B.Sc, ಪದವಿ, BE/ B.Tech, ಸ್ನಾತಕೋತ್ತರ ಪದವಿ, MCA, MBA, M.Sc, MMS, ಸ್ನಾತಕೋತ್ತರ ಡಿಪ್ಲೊಮಾ, ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯು ಯಾವುದೇ ವಾಣಿಜ್ಯ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ವಯಸ್ಸಿನ ಮಿತಿಗಳು
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಪ್ರಕಾರ ಅಭ್ಯರ್ಥಿಯು ಗರಿಷ್ಠ ವಯಸ್ಸು 45 ವರ್ಷಗಳು. ಇಲ್ಲಿ ಕೆಲವು ಹುದ್ದೆಗಳಿಗೆ ಗರಿಷ್ಠ 30 ವರ್ಷದಿಂದ 45 ವರ್ಷದವರೆಗೆ ಅರ್ಹತೆಯನ್ನು ಪಡೆದಿರುತ್ತಾರೆ. ಗರಿಷ್ಠ ವಯಸ್ಸಿನ ಮಿತಿಯು ಒಂದೊಂದು ಹುದ್ದೆಗಳಿಗೆ ಅನುಗುಣವಾಗಿ ಬೇರ್ಪಡಿಸಲಾಗಿದೆ. ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಅಧಿಸೂಚನೆಯನ್ನು ಓದಿ ನಂತರ ಉದ್ಯೋಗ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ನೋಡುವುದಾದರೆ, OBC ಅಭ್ಯರ್ಥಿಗಳಿಗೆ ಮೂರು ವರ್ಷಗಳು, SC/ST ಅಭ್ಯರ್ಥಿಗಳಿಗೆ ಐದು ವರ್ಷಗಳು ಮತ್ತು PWD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಅನ್ನು ಪರಿಗಣಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ಪರಿ ಈ ನಂತರ ಅರ್ಜಿ ಸಲ್ಲಿಸಬೇಕು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಪ್ರಕಾರ ಅಭ್ಯರ್ಥಿಗಳು, ಆನ್ಲೈನಲ್ಲಿ ಲಿಖಿತ ಪರೀಕ್ಷೆ ಬರೆಯುವ ಮೂಲಕ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಆಯ್ಕೆಯನ್ನು ಮಾಡಲಾಗುತ್ತದೆ.
ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಈ ಹುದ್ದೆಗಳು ಅರ್ಜಿ ಸಲ್ಲಿಸುವ ವಿಧಾನ
- ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ centralbankofindia.co.in.
- ನಂತರ ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಅಧಿಸೂಚನೆಯನ್ನು ಪರಿಶೀಲಿಸಿ.
- ಅಭ್ಯರ್ಥಿಗಳು ಅರ್ಜಿ ಸೂಚನೆಯನ್ನು ಪ್ರಾರಂಭಿಸುವ ಮೊದಲು ತಪ್ಪದೆ ಕೊನೆಯ ದಿನಾಂಕವನ್ನು ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವ ಮೊದಲು ಅರ್ಜಿ ಸಲ್ಲಿಸಲು ಬೇಕಾಗುವ ಡಾಕ್ಯೂಮೆಂಟ್ ಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ.
- ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರ ಆಗಿದ್ದರೆ, ಯಾವುದೇ ತಪ್ಪು ಗಳಿಲ್ಲದೆ ಅರ್ಜಿ ನಮೂನೆಯನ್ನು ತುಂಬಿ.
- ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಪ್ರಕಾರ, ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವನ್ನು ನೀವು ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ನೀಡಬೇಕು.
- ಅರ್ಜಿ ಸಲ್ಲಿಕೆಯ ನಂತರ ಒಂದು ಸಲ ನೀವು ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ.
- ಅರ್ಜಿ ಸಲ್ಲಿಕೆ ನಂತರ, ಅರ್ಜಿ ನಮೂನೆಯ ಸಂಖ್ಯೆ ಅಥವಾ ಸ್ವೀಕರಿ ಸಂಖ್ಯೆಯನ್ನು ಸೆರೆ ಹಿಡಿಯಿರಿ ಅಥವಾ ಬರೆದಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28 ಅಕ್ಟೋಬರ್ 2023,
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19 ನವೆಂಬರ್ 2023 ಮತ್ತು
- ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 19 ನವೆಂಬರ್ 2023
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ : ಅಧಿಸೂಚನೆ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ : ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್ : centralbankofindia.co.in